Monday, September 13, 2010

ಮೊದಲ ನಡಿಗೆ

This poem is on my daughter ...after watching her walking for the first time :-)

******ಮೊದಲ ನಡಿಗೆ******

ಕಂಡೆ ಮಗಳ ಮುದ್ದಾದ ಮೊದಲ ನಡಿಗೆ,
ಕೊಂಡಾಡಿದೆ ದೇವ ಕೊಟ್ಟ ಈ ರಮ್ಯ ಕೊಡುಗೆ.
ಇರಿಸಿಹಳಲ್ಲಿ ಒಂದು, ಇರಿಸಿಹಳಿಲ್ಲಿ ಒಂದು,
ರತ್ನದಂತ, ಮುತ್ತಿನಂತ ಚೆಲುವು ತುಂಬಿದ ಹೆಜ್ಜೆ.
ಘಲ್ ಘಲ್ ಎಂದಿದೆ, ಝಲ್ ಝಲ್ ಎಂದಿದೆ,
ಹೆಜ್ಜೆಯ ತಬ್ಬಿಹ ಹೊಳೆವ ಬೆಳ್ಳಿಯ ಗೆಜ್ಜೆ.

ಅಜ್ಜಿ, ಅಜ್ಜ, ಅಪ್ಪ,ಅಮ್ಮ ಕರೆದಾಗ ಓಡಿ ಬಂದು,
ತಬ್ಬಿ ನಗಲು ಮಿನುಗುವುದು ಕೆನ್ನೆಕುಳಿಯ ಬಿಂದು.
ಹೆಜ್ಜೆಗೆಚ್ಚಿದೆ ಮನೆಯ ಸೊಗಸಿನ ಪೆಂಪು,
ಸೂಸುತಿಹುದೆಲ್ಲೂ ಮನದಾನಂದದ ಕಂಪು.
ಹೃದಯ ಬಾಗಿಲಲಿ ಬರೆದಿಹುದು ಬಣ್ಣದ ರಂಗೋಲಿ,
ತುಳಿದೆರೆಚಿಹಳು ಮನಕೆ ಬಣ್ಣ ನಮ್ಮ ಸಪ್ನವಲ್ಲಿ.
ಅಡಕು ತೊಡಕಿನ ಹೆಜ್ಜೆ ತೂಗಿ ಇವಳಿಡುತಿಹಳು.
ಬಳುಕಿ ಬರದಿ ಸಾಗುವ ಮನೆಯ ಮಿಂಚಿವಳು.

ಹೆಜ್ಜೆ ಗೆಜ್ಜೆಯು ನಾದವೀಣೆಯನು ಮೀಟುತಿದೆ.
ಅಲಿಸಿದ ಮನವು, ನಾದಕೆ ತಲೆದೂಗುತಿದೆ.
ಹೆಜ್ಜೆಗುರುತು ಮೂಡಿದೆ ಮನದ ಅಂಗಳದಿ.
ಮೈಮನ ನಲುಗಿಸುವ ರೋಮಾಂಚನ ತರದಿ.
ಎಲ್ಲ ಕಣ್ಗಳ ಸೆಳಿದಿಹಳು ವೈಯ್ಯಾರಿ,
ಬಿಂಕ ಬಿನ್ನಾಣ ಸಮ್ಮೇಳಣ ಸಿಂಗಾರಿ.
ತಪ್ಪು ಹೆಜ್ಜೆಗಳಿಡುತ ಸಾಗುವ ಕಾಲ್ಜೋಡಿ,
ಬಲಿತ ಜೀವಗಳಿಗೆ ಮಾಡಿಹದು ಮೋಡಿ.

- ಚಂದ್ರಹಾಸ ( ೧೩ - ಸೆಪ್ - ೨೦೧೦)

No comments:

Post a Comment