______________________________________
----ಜಗನ್ಮೋಹಿನಿ------
ಝುಳಝುಳ ಝುಳಪಿಸುವ ಜಗನ್ಮೋಹಿನಿಯೆ ...
ನಿನ್ನ ನಕ್ಕಿ ನಲಿಸೆ ನಭಕ್ಕೇರಿಸಲು
ನಿನ್ನ ಪಾದ ಪುಷ್ಪವೃಷ್ಟಿ ಎನ್ನೆದೆಯ ಮೇಲ್ಗೆ
ನಳನಳಿಸುವ ನಯನ ಮನೋಹರಿಯೆ...
ಪ್ರೀತಿ ಪುಷ್ಕಲವಾಗಿ ನಿನ್ನ ಹೆಗಲಿಗೆ ಮುಡಿಯಲು
ಮಮತೆಯ ತಂಬೆರಲು ಬೀಸುವುದೆನ್ನೆದೆಯೊಳಗೆ
ಸುರಸುಂದರ ಸೊಬಗಿನ ಸುಕುಮಾರಿಯೆ...
ನಿನ್ನ ಪಿಡಿದು ನಾ ತೂಗಿ ಜೋಲಾಡಲು
ಪೂರ್ಣಶಶಿ ನಗುತಿಹನು ನನ್ನ ಕರದೊಳಗೆ
ಚಂಡ ಪ್ರಚಂಡ ರಣಚಂಡಿಯೆ....
ನಿನ್ನುದರದೊಳ್ ಪಸಿವೆದ್ದು ರೌದ್ರ ನರ್ತನವಾಡಲು
ಮಹಾಕಂಪನವುದ್ಭವಿಪುದು ನನ್ನ ಮಸ್ತಿಷ್ಕದೊಳಗೆ
ಚಿದ್ರೂಪ ಚಿತ್ರಾಂಗಿ ಚಿನಕುರಳಿಯೆ...
ತೊಡೆಯ ಶಯನವೇರಿ ಜಿಗಿಜಿಗಿದು ನೀನ್ ಕುಣಿಯಲು
ರಾರಾಜಿಪುದು ನಿನ್ನಲಿ ಸಂಜೆ ಸೂರ್ಯನ ಮೆರವಣಿಗೆ
ಪೊಂಗದಿರ್ ಪ್ರಜ್ವಲ ಪ್ರಭೆಲೇಪಿತ ಪುತ್ಠಳಿಯೆ...
ಸಪ್ತಸ್ವರಗಳ ನಿನಾದ ನಿನ್ನ ಬಾಯ್ತುಂಬಿ ಬರಲು
ಪಂಚವಾಧ್ಯಗಳಿಂಪು ಕೆಳ್ಪುದೆನ್ನ ಕಿವಿಗೆ
- ಚಂದ್ರಹಾಸ
No comments:
Post a Comment